Categories

  • blog

Tags

  • blog

ಮಂಗಳನೆಡೆಗೆ ಸಾಗುವ ಕನಸಿನ ಬೆನ್ನೇರಿ ಹೊರಟೆವು ನಾವು
ಅಂಗಾರಕ ನೆಡೆಗೆ ಸಾಗುವ ಪಥ ಕಠಿಣ, ನಿರ್ಧಾರ ಅಚಲ,
ಅವಿರತ ಶ್ರಮ ಆತ್ಮ ವಿಶ್ವಾಸದೊಂದಿಗೆ ಸಾಗಿದರೆ ಗುರಿ ಸಾಧಿಸಬಲ್ಲೆವು



ಚಂದ್ರನ ಮೇಲೆ ಮನುಕುಲದ ಒಂದು ಹೆಜ್ಜೆ ಏಣಿಯಾಗಲಿದೆಯೇ
ಮಂಗಳ ಗ್ರಹದಲ್ಲಿ ನೆಲೆಯೂರಲು



ಗಡಿಯಿರುವ ಭೂಮಿಯಲ್ಲಿ ಬಡಿದಾಟ
ಗಡಿಯಿರದ ಮಂಗಳನೆಡೆಗೆ ಕ್ರಮಿಸುವ ಹಾದಿಯಲ್ಲಿ ಒಗ್ಗೂಡಲಿದೆಯೇ ಮನುಕುಲ?
ಅನಂತದೆಡೆಗೆ ಸಾಗುವ ದಾರಿಯನ್ನು
ಸುಗಮಗೋಳಿಸಲಿದೆಯೇ ಆಧುನಿಕ ತಂತ್ರಜ್ಞಾನ ಈ ದಶಕದೊಳಗೆ!

ಧರೆಯಲ್ಲಿ ಮನುಸಂಕುಲವನ್ನು ಬಾಧಿಸುತ್ತಿರುವ
ಪ್ರಕೃತಿ ವಿಕೋಪಗಳನ್ನು ನಿವಾರಿಸುವ
ಹತೋಟಿಗೆ ತರುವ ಗುರುತರ ಜವಾಬ್ದಾರಿಯ
ಜೊತೆಗೆ ಸಾಗಬೇಕಾಗಿದೆ ಮಂಗಳನೆಡೆಗೆ



ಬಾಹ್ಯಾಕಾಶದ ವಿಸ್ಮಯಗಳ ಅನಾವರಣದನ್ವೇಷಣೆಯಲ್ಲಿ
ದಶಕಗಳಿಂದ ಅವಿರತವಾಗಿ ನಿರತವಾಗಿರುವ
ಶೋಧಕರಿಗೆ ನಮ್ಮದಾಗಲಿ ಅಳಿಲುಸೇವೆ,
ರಾಮಸೇತುಬಂಧದ ನಿರ್ಮಾಣದಲ್ಲಿ
ಅನಂತದೆಡೆಗೆ…..